Posts

Showing posts from August, 2024

ಸವಿ ನೆನಪಿನ ಪಯಣದಲ್ಲಿ; ಇದೊಂದು ಕೂಡಿಟ್ಟ ನೆನಪು!

ಸವಿ ನೆನಪಿನ ಪಯಣದಲ್ಲಿ; ಇದೊಂದು ಕೂಡಿಟ್ಟ ನೆನಪು!      ನೆನಪು ಸವಿಯಾಗಿರಲಿ ಕಹಿಯಾಗಿರಲಿ ಪಯಣದ ಪಥದಲ್ಲಿ ಮರೆಯಾಗದಂತೆ ಉಳಿಯುವಂತದ್ದು. ನನ್ನ ಜೀವನದಲ್ಲಿ ಎಷ್ಟೋ ನಡೆದು ಹೋದ ಘಟನೆಗಳಿರಬಹುದು. ಆದರೆ, ಈ ಸವಿನೆನಪು ಮರೆತರು ಮತ್ತೆ ಮತ್ತೆ ಮರುಕಳಿಸಿ, ಜೀವನದ ಖುಷಿಯ ಪಯಣದಲ್ಲಿ ನನ್ನೊಂದಿಗೆ ಸಾಗುತ್ತದೆ.      ಕನಸು ಕಂಡವರು ಯಾರಿಲ್ಲ ಹೇಳಿ, ಟೀಚರ್ ಆಗುವ ಕನಸು ಹೆಚ್ಚಿನ ಹುಡುಗಿಯರಿಗೆ ಚಿಕ್ಕ ವಯಸ್ಸಿನಲ್ಲಿಯೇ, ಅಮ್ಮನ ಚೂಡಿದಾರ್ ಶಾಲನ್ನು ಸುತ್ತಿ ತನ್ನಷ್ಟಕ್ಕೆ ಪಾಠ ಮಾಡಿ ತನ್ನದೇ ಕಲ್ಪನಾ ಲೋಕದಲ್ಲಿ ಮುಳುಗಿ ನಂತರ ಅಂಕಗಳ ಮೂಲಕ ಕನಸು ಬೇರೆ ದಾರಿಯನ್ನು ಸೇರಿದ್ದು ಇದೆ.      ಇದೆಲ್ಲ ಒಂದು ಕಡೆಯಾದರೆ, ನನ್ನ ಈ ಸವಿ ನೆನಪಿನ ಪಯಣಕ್ಕೆ ಸಾಕ್ಷಿಯಾದದ್ದು ಸರಕಾರಿ ಪದವಿಪೂರ್ವ ಕಾಲೇಜು, ಗುತ್ತಿಗಾರು. ಈ ಸ್ನಾತಕೋತರ ಅವಧಿಯಲ್ಲಿ ನಮ್ಮ ವಿದ್ಯಾ ಸಂಸ್ಥೆಯಿಂದ ಇಂಟರ್ನ್ಶಿಪ್ ಮಾಡುವ ಅವಕಾಶ ಸಿಕ್ಕಿದಾಗ ಉಪನ್ಯಾಸಕರಾಗಿ 15 ದಿನಗಳ ಸೇವೆ ಸಲ್ಲಿಸಬೇಕು ಎಂದುಕೊಂಡಿದ್ದೆ. ಇದರ ಬಗ್ಗೆ ನಾನು ನನ್ನ ಪ್ರೊಫೆಸರ್ ಬಳಿ ತರಗತಿಯ ವೇಳೆ ಎಷ್ಟೋ ಸಲ ಚರ್ಚಿಸಿದ್ದುಂಟು. ಇದರ ಜೊತೆಗೆ ಎಲ್ಲಿಯಾದರೂ ಅವಕಾಶ ಸಿಗದೇ ಇದ್ದಾಗ, ಬೇರೆ ಎಲ್ಲಿಯಾದರೂ ಕೆಲಸ ಮಾಡುವ ಎನ್ನುವ ಯೋಜನೆಯನ್ನು ಹಾಕಿಕೊಂಡಿದ್ದೆ ಕೂಡ. ಒಂದು ಆಯ್ಕೆ ಗುತ್ತಿಗಾರು ಕಾಲೇಜು ಆದರೆ, ಇನ್ನೊಂದೆಡೆ ಕುಮಾರಸ್ವಾಮಿ ವಿದ್ಯಾಸಂಸ್ಥೆ ಸುಬ...