ಅರೆಭಾಷೆ ಬರವಣಿಗೆ: ಆಟಿ ಗೌಜಿ
ಆಟಿ ಗೌಜಿ ನಾವು ಆಚರಿಸುವ ಹಾಂಗೆ ಎಲ್ಲಾ ತಿಂಗನು ತಿಂಗಳಾಡಿಂದ ಸುರಾಗಿ, ಸಂಕ್ರಮಣಕ್ಕೆ ಮುಗ್ದದೆ. ಕಾರ್ತಿಂಗಳಂದ ಮತ್ತೇ ಬರುವ ತಿಂಗನೇ ಆಟಿ ತಿಂಗ. ಈ ಆಟಿ ತಿಂಗಳ್ಳಿ ಸತ್ಯನಾರಾಯಣ ದೇವರ ಪೂಜೆ ಮಾಡಿರೆ ಬಾರಿ ಒಳ್ಳದ್ ಗಡ. ಆಟಿ ತಿಂಗ ಅಂತ ಹೇಳಿರೇ , ಬಾರಿ ಜೋರುನ ಮಳೆ ಬರುವ ತಿಂಗ. ಕೆಲ್ಸ ಮಾಡಿಕೆ ಆಗದೆ, ಕೆಲ್ಸಕ್ಕೂ ಹೋಕಾಗದೆ ಕಷ್ಟಲಿ ಬೊದ್ಕುವ ತಿಂಗ ಈ ಆಟಿ ತಿಂಗ. ತಾತನವು ಬೇಸಾಯ ಮಾಡಿಕಂಡ್ ಇರ್ಕಣ ನಮ್ಮ ಊರ್ಲಿ ಅಂದರೆ ಕಾರ್ತಿಂಗಳ್ಳಿಯೇ ಬೇಸಾಯ ಮುಗಿತಿತ್ತ್ ಗಡ . ಅದರೆ ಈ ಮಡಿಕೇರಿ ಅತ್ತ ಆಟಿ ಬೇಸಾಯಲಿ ಎಲ್ಲನೂ ಬೊಳ್ಳಲಿ ಹೋತ್ ಅಂತ ಹೇಳ್ದರ ಕೇಳ್ತ ಇದ್ದಗಡ. ಇದ್ ಬಾರಿ ಕಷ್ಟದ ತಿಂಗ ಹಾಂಗಾಗಿ ಈ ಕಾಲನಾ ತುಂಬಾ ಕೆಟ್ಟ ಕಾಲ ಅಂತ ಹೇಳುವೆ ಹಿರಿಯವ್. ಆಟಿ ತಿಂಗ ಹೇಳ್ದ ಕೂಡ್ಲೇ ನೆನ್ಪಿಗೆ ಬಾದೆ "ಆಟಿಕಳಂಜ". ಇದರೊಟ್ಟಿಗೆ ಗುಳಿಗಂಗೆ ಕೊಡುವ ಸಮ್ಮನ. ಆಟಿತಿಂಗಳಿ ಮರಕೆಸ ಎಲೆ ಪತ್ರೊಡೆ, ಕಣಿಲೆ ಗೈಪು, ಅಜಂಕ್ ಪಲ್ಯ, ಅಳುಂಬು, ಆಟಿ ಹದಿನೆಂಟರ ಆಟಿ ಪಾಯಸ, ಅಮಾವಾಸೆ ನ ಹಾಲೆಮರದ ಕಷಾಯ; ಇದೆಲ್ಲಾ ಆಟಿತಿಂಗಳ ವಿಶೇಷ ಆದರೆ ಅಟ್ಟಂದ ಇಳ್ಸಿದ ಚೆನ್ನಮಣೆ, ಕವಡೆ ಇದೆಲ್ಲಾ ಅದ್ಭುತ ಆಟಗ. ಆಟಿಕಳಂಜ ಈಗನ ಕಾಲಲಿ ಕಮ್ಮಿ ಆಗಿರ್ದು ಆದರೆ, ಹಿಂದೆ ತಾತನವರ ಕಾಲಲಿ ಮೂರು ವರ್ಗದವು ವೇಷ ಹಾಕಿಕಂಡ್ ಬರ್ತಾ ಇದ್ದಗಡ. ಸುರುಗೆ ಬಣ್ಣರ ದೆವ್ವ, ಮಳಿಯಾರ್ ದೆವ್ವ ಮತ್ತೆ ಅಜಲ ವರ್ಗದ ಆಟಿಕಳಂಜನ ವೇಷಧರಿಸಿ ಬರ್ತ ಇದ್ದ