Posts

Showing posts from May, 2021

ಕಾಡ್ ಮಾವಿನ ಹಣ್ಣಿನ ಗತ್ತ್..!

ವಸಂತ ಕಾಲಲಿ ಎಲ್ಲ ಮರನು ಚಿಗುರಿಕೆ ಸುರು ಆಗುವ ಹಾಂಗೆ ಹಣ್ಣಿನ ರಾಜನಾದ ಮಾವಿನ ಮರನು ಚಿಗುರಿಕೆ ಸುರು ಆದು. ತೋತಪುರಿ, ನೀಲಾಂ, ಪಾಂಡಿ, ನೆಕ್ಕರೆ ಹೀಂಗೆನೇ ಬೇರೆ-ಬೇರೆ ರೀತಿನಾ ಮಾವಿನ ಮರಗ ಇದ್ದರೂ; ಈ "ಕಾಡ್ನ ಮಾವಿನ ಹಣ್ಣಿಗೆ" ಬಾರಿ ಬೇಡಿಕೆ ಇರ್ದು.      ಕಾಡ್ ಮಾವಿನ ಮಿಡಿಗೆ ಬಾರಿ ಡಿಮಾಂಡ್. ಎಲ್ಲವೂ ಅವರವರ ನೆಂಟ್ರ ಮನೆಯವ್ಕೆಫೋನ್ ಮಾಡಿದ್ ಕೇಳುವ, 'ಎಲ್ಲಿಯಾರ್ ಮಾವಿನ ಮಿಡಿ ಉಟ್ಟಾ? ಇದ್ದರೆ ಬೇಕಿತ್ತ್. ಆಚೊರ್ಷ ಹಾಕಿದ ಮಿಡಿ ಪೂರ ಕಾಲಿ ಆತ್ ತ. ಮಾವಿನ ಮಿಡಿ ಸಿಕ್ಕಿದ ಮೇಲೆ ಅದರ ಲಾಯಿಕ್ ಉಜ್ಜಿದ್ ಸಣ್ಣಕ್ಕೆ ತೊಟ್ಟುನಾ ಇಸಿದ್ ಭರಣಿಲಿಯಾ, ಡಬ್ಬಿಲಿಯಾ ಉಪ್ಪು ಹಾಕಿಸಿದ್ ತೆಗ್ದ್ ಇಸುವ. ಇದ್ ಒಂದು ವರ್ಷ ಅಲ್ಲ ಎರಡು ವರ್ಷ ಅಲ್ಲ, ಮೂರು ವರ್ಷ ಕಲ್ದರುನೂ ಏನೂ ಆಕಿಲೆ.       ಬೊಳ್ಪ್ ಆಕೆ ಪುರೋಸೊತ್ತಿಲೆ, ಅಮ್ಮ ಬೇಗನೇ ಮಕ್ಕಳ ಕರ್ದ್ ಮಾವಿನ ಹಣ್ಣ್ ಹೆಕ್ಕಿಕ್ಕೆ ಕಲ್ಸುವ. ಮಾವಿನಹಣ್ಣ್ ತಂದಮೇಲೆ ಹಾಳಾದರೆಲ್ಲಾ ಬಿಸಾಡಿ ಲಾಯಿಕ್ ಇರುದರ ತಡ್ಪೆಲಿ ತೆಗ್ದು ಇಸುವ. ಮಧ್ಯಾಹ್ನದ ಊಟಕ್ಕೆ ಮೆಣ್ಸ್ ಹಾಕಿ ಚಂಡ್ರುಪುಳಿ ಮಾಡುವ. ಆದಿನ ನಾಲ್ಕ್ ಸೆಡೆ ಹುಗ್ಗೆ ಜಾಸ್ತಿನೇ ಹೋದು. ಉಂಡು ಆದಾಮೇಲೆ ಯಾರ ಕೊರಂಟಿಲಿ ಕುದ್ರುಸಿರೇ ಆದು ಅಂತ ಮಕ್ಕ ಯೋಚಿಸಿಕ್ಕೆ ಶುರು ಮಾಡುವ. ಕತ್ತಲೆಯ ಊಟಕ್ಕೆ ತೆಳಿಲಿ ಮಾವಿನಹಣ್ಣುನ ಪುರುಂಚಿದ್ ಲಾಯಿಕ್ನ ಉಪ್ಪು ಮೆಣ್ಸ್ ಮಾಡಿಕೊಡುವ.      ಅವ್ವನವು ಇದ್ದ ಮನೇಲಿ ಅಂತೂ ಹೇಳಿ ಸುಖ ಇಲ್ಲೆ