ಕಾಡ್ ಮಾವಿನ ಹಣ್ಣಿನ ಗತ್ತ್..!
ವಸಂತ ಕಾಲಲಿ ಎಲ್ಲ ಮರನು ಚಿಗುರಿಕೆ ಸುರು ಆಗುವ ಹಾಂಗೆ ಹಣ್ಣಿನ ರಾಜನಾದ ಮಾವಿನ ಮರನು ಚಿಗುರಿಕೆ ಸುರು ಆದು. ತೋತಪುರಿ, ನೀಲಾಂ, ಪಾಂಡಿ, ನೆಕ್ಕರೆ ಹೀಂಗೆನೇ ಬೇರೆ-ಬೇರೆ ರೀತಿನಾ ಮಾವಿನ ಮರಗ ಇದ್ದರೂ; ಈ "ಕಾಡ್ನ ಮಾವಿನ ಹಣ್ಣಿಗೆ" ಬಾರಿ ಬೇಡಿಕೆ ಇರ್ದು.
ಕಾಡ್ ಮಾವಿನ ಮಿಡಿಗೆ ಬಾರಿ ಡಿಮಾಂಡ್. ಎಲ್ಲವೂ ಅವರವರ ನೆಂಟ್ರ ಮನೆಯವ್ಕೆಫೋನ್ ಮಾಡಿದ್ ಕೇಳುವ, 'ಎಲ್ಲಿಯಾರ್ ಮಾವಿನ ಮಿಡಿ ಉಟ್ಟಾ? ಇದ್ದರೆ ಬೇಕಿತ್ತ್. ಆಚೊರ್ಷ ಹಾಕಿದ ಮಿಡಿ ಪೂರ ಕಾಲಿ ಆತ್ ತ. ಮಾವಿನ ಮಿಡಿ ಸಿಕ್ಕಿದ ಮೇಲೆ ಅದರ ಲಾಯಿಕ್ ಉಜ್ಜಿದ್ ಸಣ್ಣಕ್ಕೆ ತೊಟ್ಟುನಾ ಇಸಿದ್ ಭರಣಿಲಿಯಾ, ಡಬ್ಬಿಲಿಯಾ ಉಪ್ಪು ಹಾಕಿಸಿದ್ ತೆಗ್ದ್ ಇಸುವ. ಇದ್ ಒಂದು ವರ್ಷ ಅಲ್ಲ ಎರಡು ವರ್ಷ ಅಲ್ಲ, ಮೂರು ವರ್ಷ ಕಲ್ದರುನೂ ಏನೂ ಆಕಿಲೆ.
ಬೊಳ್ಪ್ ಆಕೆ ಪುರೋಸೊತ್ತಿಲೆ, ಅಮ್ಮ ಬೇಗನೇ ಮಕ್ಕಳ ಕರ್ದ್ ಮಾವಿನ ಹಣ್ಣ್ ಹೆಕ್ಕಿಕ್ಕೆ ಕಲ್ಸುವ. ಮಾವಿನಹಣ್ಣ್ ತಂದಮೇಲೆ ಹಾಳಾದರೆಲ್ಲಾ ಬಿಸಾಡಿ ಲಾಯಿಕ್ ಇರುದರ ತಡ್ಪೆಲಿ ತೆಗ್ದು ಇಸುವ. ಮಧ್ಯಾಹ್ನದ ಊಟಕ್ಕೆ ಮೆಣ್ಸ್ ಹಾಕಿ ಚಂಡ್ರುಪುಳಿ ಮಾಡುವ. ಆದಿನ ನಾಲ್ಕ್ ಸೆಡೆ ಹುಗ್ಗೆ ಜಾಸ್ತಿನೇ ಹೋದು. ಉಂಡು ಆದಾಮೇಲೆ ಯಾರ ಕೊರಂಟಿಲಿ ಕುದ್ರುಸಿರೇ ಆದು ಅಂತ ಮಕ್ಕ ಯೋಚಿಸಿಕ್ಕೆ ಶುರು ಮಾಡುವ. ಕತ್ತಲೆಯ ಊಟಕ್ಕೆ ತೆಳಿಲಿ ಮಾವಿನಹಣ್ಣುನ ಪುರುಂಚಿದ್ ಲಾಯಿಕ್ನ ಉಪ್ಪು ಮೆಣ್ಸ್ ಮಾಡಿಕೊಡುವ.
ಅವ್ವನವು ಇದ್ದ ಮನೇಲಿ ಅಂತೂ ಹೇಳಿ ಸುಖ ಇಲ್ಲೆ; ನನ್ನ ಆ ನೆಂಟ್ರಿಗೆ ಈ ಮಗಳಿಗೆ ಅಂತ ಮಾವಿನಹಣ್ಣ್, ಮಿಡಿ ಪೂರ ತೆಗ್ದು ಇಸುವ. ಉಳ್ದ ಹಣ್ಣ್ನ ಲಾಯಿಕ್ ಪುರುಂಚಿದ್, ಸ್ವಲ್ಪ ಉಪ್ಪು-ಖಾರ ಹಾಕಿ ತಡ್ಪೆ ಮೇಲೆ ಬಟ್ಟೆ ಅಥವಾ ಒಳಿ ಮಂದ್ರಿ ಮೇಲೆ ಪೂಜಿದ್ ಬಿಸಿಲಿಗೆ ಇಸುವ; ಬಿಸಿಲಿನೊಟ್ಟಿಗೆ ಇದ್ ಒಣಗಿಕಂಡ್ ಬಂದಹಾಂಗೆ ಮನೇಲಿ ಇದ್ದ ಮಕ್ಕ ಕದ್ದ್ -ಕದ್ದ್ ತಿನ್ನುವ. ಮತ್ತೆ ಉಳ್ದ ಹಣ್ಣ್ನ ಉಪ್ಪುಲಿ ಹಾಕಿ ತೆಗ್ದ್ ಇಸುವ. ಇಸಿಕನನೇ ಹೀಂಗೆ ಹೇಳುವ, 'ಯಾರ್ ಮುಟ್ಟಿಕೆ ಹೋಗ್ಬೇಡಿ; ಇದ್ ಮಳೆಗಾಲಲೀ ಗೈಪು ಮಾಡಿಕೆ ಇದ್ದದ್' ಅಂತ.
ಅಮ್ಮ ಮಾಡುವ ಬೆಲ್ಲ ಹಾಕಿದ ಗೈಪು ಲಾಯಿಕ್, ಮಾವಿನ ಹಣ್ಣಿನ ಕೊಚ್ಚಿದ್ ಮಾಡುವ ಚಟ್ನಿನೂ ಬಾರಿ ಲಾಯಿಕ್.ಇದರೊಟ್ಟಿಗೆ ಪುರ್ಸೋತ್ತಿರ್ಕನ ಮಾಡುವ ಪಾಯಸ ಇನ್ನೂ ಲಾಯಿಕ್. ಎಲ್ಲ ಕಡೆಲಿಯೂ ಜನಗ ಮಳೆ ಬಾಕೆನೆ ಕಾಯುವ. ಯಾಕೆಂತ ಹೇಳಿರೇ, ನಾಲ್ಕ್ ಮಳೆ ಬಿದ್ದ ಕೂಡ್ಲೆ ಮಾವಿನಹಣ್ಣ್ ಸಿಹಿ ಇದ್ದ್ ಬಾರಿ ಲಾಯಿಕ್ ಆದೆ.
ಈ ಮಕ್ಕಳಿಗೆ ರಜೆ ಸುರು ಆಕನ ಆಗುವ ಹಣ್ಣ್, ಮಕ್ಕಳಿಗೆ ಶಾಲೆ ಸುರು ಆಕನ ಮುಗ್ದು ಕಾಲಿ ಆದೆ. ರಜೆಲಿ ಇದರ ಬಗ್ಗೆ ಲಾಯಿಕ್ ಕಲಿಯಕ್. ತಿಂದ ಹಣ್ಣ್ಲಿ ಯಾರ ಕೊರಂಟಿಲಿ ಕುದ್ರುಸುದು ಇದೆಲ್ಲಾ ಒಂದು ತಮಾಷೆ ಆಟ ಆಗಿದ್ದದೆ. ಈ ಕತೆನಾ ಹೇಳಿಕೆ ಹೋದರೆ ಮುಗಿಯಕಿಲೆ; ಎಸ್ಟೇ ಪ್ರಾಯ ಆದರೂ ಇದರ ಒಂದು ಬಗೆ ಮರೆಯಕೇ ಆಕಿಲೆ...
-ಸಿಂಚನ.ಕೆ.ಎನ್
ಕುತ್ಯಾಳ, ಕುಡ್ನಕಜೆ ಮನೆ
Wow! You are very talented. Amazing vocabulary! We look forward to many more articles from you.
ReplyDeleteSupar
ReplyDeleteSprb 👌👌
ReplyDeleteSuper 🔥
ReplyDelete