ವಿಮರ್ಶೆ ಕಥಾನ - ಕವಲು

ವಿಮರ್ಶೆ ಕಥಾನ- ಕವಲು
     ಮೊದಲಿಗೆ ನಾನು ಪುಸ್ತಕವನ್ನು ಆಯ್ಕೆ ಮಾಡಿಕೊಂಡ ಕಾರಣವೇ ಲೇಖಕರು, ಅವರೇ ಎಸ್.ಎಲ್.ಭೈರಪ್ಪ , ಇವರು ಬರೆಯುವ ಲೇಖನಗಳ ಶೈಲಿಯನ್ನು ಕೇಳಿದ್ದೆ; ಆದರೆ ಓದಿರಲಿಲ್ಲ. ಓದಲು ಕಾರಣವಾದದ್ದೆ ೨೦೨೩(2023)ರ ಕ್ರಿಸ್ಮಸ್ ರಜೆ. ಕೇವಲ ಲೇಖಕರ ಹೆಸರನ್ನು ನೋಡಿ ಮೊದಲ ಪುಟದಲ್ಲಿ ಏನಿರಬಹುದು ಎಂದುಕೊಂಡಾಗ "ಸರಿಯಾಗಿ ತಿಳಕ. ನಾನು ನಿನಗೆ ಕಸಿನ್ ಅಲ್ಲ. ಬ್ರದರ್. ಅಂದರೆ ಅಣ್ಣ. ನೀನು ನನಗೆ ಸಿಸ್ಟರ್. ಅಂದರೆ ತಂಗಿ'', ಈ ಸಾಲುಗಳು ನನ್ನನ್ನು ಕುತೂಹಲಕಾರಿಯ ಕಡೆಗೆ ಎಳೆಯಿತು. ಅದೇ ಪುಸ್ತಕದ ಹೆಸರು " ಕವಲು".
ಕವಲು, ಅರ್ಥವೇ ಹೇಳುತ್ತದೆ ರೆಂಬೆ, ಕೊಂಬೆ. ವಿಷಯಗಳು ಸಕರಾತ್ಮಕವಾಗಿರಲಿ, ನಕರಾತ್ಮಕವಾಗಿರಲಿ ಕವಲು ಒಡೆದ ಕೂಡಲೇ ವಿಷಯ ಪಸರಿಸುತ್ತದೆ. ಪುಟ ಸಂಖ್ಯೆ ೨೪(24) ಮತ್ತು ೨೫(25)ಕ್ಕೆ ಬಂದು ನಿಂತಾಗ; ನಾನು ಆರಿಸಿರುವ ಪುಸ್ತಕ ತಪ್ಪಾಗಿದೆ; ಸಾಕು ನಿಲ್ಲಿಸುವ ಎಂದೆನಿಸಿತು. ಸ್ವಲ್ಪ ನಂತರ ಮತ್ತೊಮ್ಮೆ ಪುಸ್ತಕವನ್ನು ಕೈಗೆತ್ತಿಕೊಂಡು ಸಣ್ಣ ಮಟ್ಟಿಗೆಯ ಕಾದಂಬರಿ ಓದುಗಾರಳಾದ ನಾನು ಓದಲೇ ಬೇಕು ಎಂದೆನಿಸಿ ಶುರುಮಾಡಿದಾಗ ೩೦೦(300) ಪುಟಕ್ಕೆ ತಲುಪಿದ್ದು ಗೊತ್ತೇ ಆಗಲಿಲ್ಲ. ಓದಿದ ನಂತರ ಸಾರ್ಥಕತೆ ಎಂದೆನಿಸಿತು; ಜೊತೆಗೆ ಈ ಪುಸ್ತಕದ ಪರಿಚಯವನ್ನು ಕೆಲವರೊಂದಿಗೆ ವಿಮರ್ಶಿಸಿದುವುದರ ಜೊತೆಗೆ ಎಷ್ಟು ಪ್ರಶ್ನೆಗಳನ್ನು ಹುಟ್ಟಿಸಿವೆ; ಬದುಕು ಎಂದರೆ ಏನನ್ನೆಲಾ ಎದುರಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

     ಒಂದು "ಕಾಮ"ದಿಂದ ಬದುಕು ಎಷ್ಟೇ ಸುಂದರವಾಗಿದ್ದರೂ, ಯಾರು ಬೆಲೆ ಕೊಡದೆ ಅಸಹ್ಯ ಪಡುವ ಸ್ಥಿತಿ ಬರಬಹುದು. "ಕಾಮಕ್ರಿಯೆ" ತಪ್ಪಲ್ಲ; ಆದರೆ ಇದು ಪಾಶ್ಚಿಮಾತ್ಯ ದೇಶಕ್ಕೆ ಮಾತ್ರ ಚಂದ ಜೊತೆಗೆ ಅಲ್ಲಿಂದಲೇ ರೂಪಕಗೊಂಡಿದ್ದರು ಕೂಡಾ, ಈ ನಂಟು ಗಂಡ-ಹೆಂಡತಿಯ ನಡುವೆ ಇರಬೇಕೇ ಹೊರತು ಯಾವುದೂ ಮೂರನೇ ವ್ಯಕ್ತಿಗಲ್ಲ. ಹಾಗೆಲ್ಲಾದರೂ ಮೂರನೇ ವ್ಯಕ್ತಿಯ ಮೇಲೆ ಈ ಕಾರ್ಯ ಒದಗಿಬಂತೆಂದರೆ ಬದುಕಿನ ಸಾರ್ಥಕತೆಗೆ ತಿರುಗದೆ ಶೂನ್ಯದ ಕಡೆಗೆ ಪಯಣವಾದಿತು.

     ಒಂದು ವಾಹನದ ಅಪಘಾತವಾಗದೇ ಇದ್ದಿದ್ದರೆ ಇಂದು ದೊಡ್ಡ ಕಂಪೆನಿಯ ಮಾಲಿಕ ತನ್ನ ಹೆಂಡತಿಯನ್ನು ಕಳೆದುಕೊಳ್ಳುತ್ತಿರಲ್ಲಿಲ್ಲ; ಜೊತೆಗೆ ಯಾರು ಕೂಡಾ ಆ ವ್ಯಕ್ತಿಯ ಮೇಲೆ ಬೆರಳನ್ನು ಸೂಚಿಸುವಂತಿರಲಿಲ್ಲ; ನಿಜವಾಗಿಯೂ ಇಂದು ಅವನದ್ದೇ ನೆಮ್ಮದಿಯ ಜೀವನವಾಗುತಿತ್ತು. ಆತನ ಮಗು ಬುದ್ಧಿಮಾಂದ್ಯ ಜೀವನಕ್ಕೆ ತಿರುಗಲು ಅಪಘಾತವೇ ಕಾರಣವಾದರೆ; ಅಪ್ಪನ ಸ್ವಾರ್ಥದ ಮೇಲೆಗೆ ಈಕೆ ಮಲತಾಯಿಯ ಕೈಗೆ ಸಿಲುಕಿ ಒದ್ದಾಡುವ ಸ್ಥಿತಿಯು ಬರುತ್ತಿರಲಿಲ್ಲ. ಯಾರೋ ಮಾಡಿದ ತಪ್ಪು, ಇನ್ನಾರನ್ನೂ ಬಲಿ ತೆಗೆದುಕೊಂಡಿತು ಎಂದರು ತಪ್ಪಲ್ಲ. ಇಲ್ಲಿ ನಾನು ಕೇವಲ ಗಂಡಸಿನದ್ದು ಮಾತ್ರ ತಪ್ಪು ಎನ್ನುವುದಲ್ಲ, ಒಂದು ಹೆಣ್ಣಿನ ಅಪ್ಪಣೆಯ ಮೂಲಕ ಅಲ್ಲವೇ ದೇಹ ಸಂಬಂಧ ಮಾಡಲು ಕಾರಣವಾಗುವುದು. ಆದದ್ದು ಆಯಿತು! ಎಮ್.ಡಿ ಗೆ ದೇಹ ಸುಖಬೇಕಾಗಿತ್ತು; ತನ್ನ ಕಂಪೆನಿಯ ಪಿ.ಎ ಯನ್ನೇ ವರಿಸಿದರು. ಇದು ಶುರುವಾಗಲು ಆದಿ ಎನ್ನುವುದು ಇರಲೇಬೇಕಲ್ಲಾ? ಅದೇ ಆಕೆಯ ಕೈಯಲ್ಲಿದ್ದ "ಸ್ತ್ರೀ ವಿಮೋಚನೆಯ ಹನ್ನೆರಡು ಮುಖ್ಯ ಸೂತ್ರಗಳು". ಹೌದು, ತಪ್ಪು ಇಬ್ಬರದ್ದು ಆಗಿತ್ತು, ಮುಂದಿನ ಜೀವನವನ್ನಾದರೂ ಜೊತೆಗೆ ನಡೆಸಬಹುದಿತ್ತು. ಅವಳು ವಿಧವೆಯಾದರು ಇನ್ನೊಂದು ಗಂಡಸಿನ ಅವಶ್ಯಕತೆ ಏನಿತ್ತು, ಹಾಗೆನಿದ್ದರೂ ಮಾಲಿಕನನ್ನೇ ಮದುವೆಯಾದ ಮೇಲೂ ಸುಂದರ ಜೀವನವನ್ನು ನಡೆಸಬಹುದಿತಲ್ಲವೇ? ಆದರೆ ಈಕೆ ಕಾಲೇಜಿನಲ್ಲಿ ನಡೆದುಹೋದ ವಿಷಯಕ್ಕೆ ಪೂರ್ಣವಿರಾಮ ಹಾಕದೆ ಕೊನೆಗೆ ಗಂಡು ಮಗುವಿನ ಜನನವಾದ ಬಳಿಕ ಆ ಮಗುವಿನ ತಂದೆ ಯಾರೆನ್ನುವ ಸಂಶಯ ಹುಟ್ಟುತ್ತಿರಲ್ಲಿಲ್ಲ. ಕಂಪೆನಿಯ ಮಾಲಿಕನಿಗೆ ಮಹಿಳಾ ಸಂಘಟಕಗಳ ಮೂಲಕ ಮದುವೆಯಾದರು ಇಲ್ಲಿ ಹೆಂಡತಿಯ ಪ್ರೀತಿ ಸಿಗಲಿಲ್ಲವೆಂದು ಕಂಪೆನಿಯ ಮೀಟಿಂಗ್ಗೆ ಎಂದು ಬೇರೆ ಊರಿಗೆ ಹೋದಾಗ ಅಲ್ಲಿ ಬೇರೊಂದು ಹೆಣ್ಣಿನ ಅಂದರೆ ಕಾಮದ ಅವಶ್ಯಕತೆ ಇತ್ತಾ? ಎಷ್ಟು ಜನರನ್ನು ಬಂಧಿಸಿದಾಗ ; ತಿಳಿದವರಿಗೂ ತಿಳಿಯದವರಿಗೂ ಎಲ್ಲರಿಗೂ ವಿಚಾರ ಪ್ರಚಾರವಾಗಲಿಲ್ಲವೇ? ಇದೆಲ್ಲಾವೂ ಒಂದು ಕಡೆಯಾದರೆ ತನ್ನ ಅಕ್ಕನ ಮಗ ಅಂದರೆ ಅಳಿಯ ಅಮೇರಿಕಾದಲ್ಲಿ ಬೆಳೆದು ಹುಡುಗಿಯನ್ನು ಪ್ರೀತಿಸಿ 'ಲೀವಿಂಗ್ ಟೂಗೆದರ್' ಎಂದು ಜೊತೆಗೆ ಎಷ್ಟು ವರುಷಗಳಿದ್ದು ನಂತರ ಆಕೆ ಮತ್ತೊಬ್ಬನ ಕೈ ಹಿಡಿದಾಗ; ಈತ ಆಕೆಯನ್ನು ಮರೆಯಲು ಮತ್ತೊಬ್ಬರ ಕೈ ಹಿಡಿದು ಎಷ್ಟು ಹಣ ಕಳೆದುಕೊಳ್ಳಲ್ಲಿಲ್ಲ. ಕೊನೆಗೆ ಮನೆಯವರ ಒಪ್ಪಿಗೆಯ ಮೇಲೆ ವಯಸ್ಸಿನ ಅಂತರ ಇದ್ದರೂ ತನ್ನ ಮಾವನ ಮಗಳು ಅಂದರೆ ಇದೇ ಈ ಬುದ್ಧಿಮಾಂದ್ಯ ಹುಡುಗಿಯನ್ನು ಮದುವೆಯಾಗಿ ಸುಖದ ಸಂಸಾರವನ್ನು ಸಾಗಿಸುವ ಇವನು ಮೊದಲೇ ಈ ಕೆಲಸ ಮಾಡುತ್ತಿದ್ದರೆ ಎಷ್ಟು ಚಂದವೆನಿಸುತ್ತಿತ್ತೇನು?

     ಯಾವುದೇ ಬೀಜ ಒಡೆದು ಫಸಲು ಬರಲು ಒಂದು 'ಬಿತ್ತನೆ'ಯ ಕೆಲಸ ಅವಶ್ಯಕ. ಇಲ್ಲಿಯು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪಿ.ಎ.ಗೆ ಮತ್ತು ಆಕೆಯ ಕಾಲೇಜಿನ ಹುಡುಗನಿಗೂ ಧೈರ್ಯ ತುಂಬಿಸಿದ್ದು ಆಕೆಯ ಪ್ರಾಧ್ಯಾಪಕಿ. ಅವರು ಕಲಿತದ್ದು ಪಾಶ್ಚಿಮಾತ್ಯ ದೇಶದಲ್ಲಿ, ಅಲ್ಲಿನ ಆಚಾರ- ವಿಚಾರಗಳನ್ನು ಇಲ್ಲಿ ಪಸರಿಸಿದರು; ಜೊತೆಗೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ಕೂಡಾ 'ದೇಹ ಕ್ರಿಯೆ'ಗೆ ಅಳವಡಿಸಿಕೊಳ್ಳುವುದರ ಜೊತೆಗೆ ಅನುಮತಿಯೊಂದಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದರು. ಈ ಮೇಡಂ ಮತ್ತು ಇವರ ಗಂಡ ಪ್ರೀತಿಸಿ ಮದುವೆಯಾದರೂ, ಒಂದು ಮಗಳಿದ್ದರೂ ತನ್ನದೇ ಸುಂದರವಾದ ಸಂಸಾರವನ್ನು ಕಟ್ಟಿಕೊಳ್ಳಬೇಕಾಗಿತ್ತು. ಆದರೆ, ಇಲ್ಲಿ ತನ್ನ ಗಂಡನ ದುಡಿಮೆಯನ್ನು ಅರ್ಥಮಾಡಿಕೊಳ್ಳದೆ; ತನ್ನ ಮಗಳ ಭಾವನೆಗಳಿಗೂ ಸ್ಪಂದಿಸದೇ ಇದ್ದದ್ದು ನಿಜವಾಗಿಯೂ ಆಕೆ ಮಾಡಿದ್ದು ತಪ್ಪು. ಬೇರೆ ದೇಶಕ್ಕೆ ಮೀಟಿಂಗ್, ಕಾನ್ಪೆರೆನ್ಸ್ಗೆ ಹೋದಾಗ ರಾಜಕಾರಣಿಯ ಪರಿಚಯವಾದರೂ ತಾನು ಮಾಡುತ್ತಿರುವ ತಪ್ಪಿನ ಕೆಲಸದ ಅರಿವಾಗುತ್ತಿದ್ದರು ಆ ಕೆಲಸವನ್ನು ಮಾಡದೆ ಇದ್ದಿದ್ದರೆ; ಅಥವಾ ಮಾಡಿದ ಕೆಲಸವನ್ನು ಅಲ್ಲಿಯೇ ಮರೆತುಬಿಟ್ಟು ಊರಿಗೆ ಬಂದಾಗ ಪುನಾರವರ್ತಿಸದಿದ್ದರೆ ಮಗಳ ಮುಂದೆ ಆದರೂ ಆಕೆ ಒಳ್ಳೆಯ ತಾಯಿಯಾಗಿ ನಾಯಕಿಯಾಗುತ್ತಿದ್ದಳು. ಇಲ್ಲಿ ಈಕೆಯ ಕೆಲಸದಿಂದಾಗಿ ಮಗಳ- ತಂದೆಯ ಬಾಂಧವ್ಯ ಗಟ್ಟಿಯಾಗುವುದರ ಜೊತೆಗೆ ಉತ್ತಮ ಗೆಳೆಯನ ಸ್ಥಾನದಲ್ಲಿ ಆ ಜಾಗವನ್ನು ಪೂರ್ತಿ ಮಾಡಿದ್ದು ಅವಳ ಚಿಕ್ಕಪ್ಪನ ಮಗ ಅವಳ ಅಣ್ಣ. ಇದರೊಂದಿಗೆ ತಂದೆಯ ಕಡೆಯ ಸಂಬಂಧವು ಗಟ್ಟಿಯಾದದ್ದು ಸಕರಾತ್ಮಕವಾಗಿ ಕಾಣಬಹುದು. ಕೊನೆಗೆ ಈ ಮಗಳು ಕೆಲಸಕ್ಕೆಂದು ಸೇರಿದ್ದು ಆ ಬುದ್ಧಿಮಾಂಧ್ಯ ಹುಡುಗಿಯ ಗಂಡನ ಕಂಪೆನಿಗೆ ಆಗಿತ್ತು. ಇವರಿಬ್ಬರ ಸಂಬಂಧವನ್ನು ನೋಡಿ ನನ್ನನ್ನು ಹೀಗೆಯೇ ಪ್ರೀತಿಸುವ ಗಂಡು ಸಿಗಬೇಕೆಂದು ಆಸೆ ಪಟ್ಟಿದ್ದಳು. ಇದರ ಈ ಅನಿಸಿಕೆಯನ್ನು ತನ್ನ ಅಣ್ಣನೊಂದಿಗೆ ಇಮೇಲ್ ಮೂಲಕ ಹಂಚಿಕೊಳ್ಳುತ್ತಾಳೆ.

     "ಕವಲು" ಎನ್ನುವ ಹೆಸರೇ ಇಲ್ಲಿ ಪ್ರತಿಯೊಂದು ಸಂಬಂಧಕ್ಕೆ ಅಡಿಪಾಯವಾಗಿದೆ. ವಿಷಯಗಳು ಸಕರಾತ್ಮಕವಾಗಿರಲಿ ನಕರಾತ್ಮಕವಾಗಿರಲಿ ಎಷ್ಟೇ ವಿದ್ಯಾವಂತರಾದರೂ ನಮ್ಮತನ, ಆಚಾರ- ವಿಚಾರಗಳು ಇವೆಲ್ಲವೂ ನಮ್ಮ ದೇಶದ್ದೇ ಆದರೆ, ಅದರ ಸೌಂದರ್ಯವೇ ಬೇರೆ. ಪಾಶ್ಚಿಮಾತ್ಯ ಆಚಾರ- ವಿಚಾರಗಳ ಅನುಸರಿಸುವಿಕೆ ತಪ್ಪಲ್ಲ. ಆದರೆ ಮುಂದೆ ಏನಾದೀತು, ಏನಾಗಬಹುದು ಎಂಬ ಯೋಚನೆ ಎಲ್ಲರಿಗೂ ಇರಬೇಕಾದದ್ದು. ಪುಸ್ತಕದಲ್ಲಿ ತಿಳಿಸಿರುವಂತೆಯೇ, ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು. ಪರಿಚಯಿಸಿಕೊಟ್ಟ ಎಸ್.ಎಲ್.ಭೈರಪ್ಪ ಸರ್ ಇವರಿಗೆ ನನ್ನ ಮನದಾಳದ ಅಭಿವಂದನೆಗಳು.

     ಈ ಕಥೆಯನ್ನು ಮೊದಲ ಬಾರಿಗೆ ಓದಿದಾಗ ಎಷ್ಟು ಪ್ರಶ್ನೆಗಳು ಹುಟ್ಟಿದರೂ, ಬರೆಯುವ ಸಮಯದಲ್ಲಿ ಈ ಕಾದಂಬರಿ ಸೂಕ್ತವಾ? ಆರಿಸಿಕೊಂಡದ್ದು ತಪ್ಪಾಗಿದೆಯೇ ಎನ್ನುವ ಗೊಂದಲದಲ್ಲೆ ಬರೆದೆ. ವಿಜೇತರ ಪಟ್ಟಿಯಲ್ಲಿ ನನ್ನ ಹೆಸರನ್ನು ಕಂಡಾಗ ನಿಜವಾಗಿಯೂ ತೃಪ್ತಳಾದೆ.

     ಇಂದಿನ ಜಗತ್ತಿಗೆ "ಕವಲು" ಪುಸ್ತಕ ಸೂಕ್ತವಾಗಿದೆ. ಪ್ರತಿಯೊಬ್ಬರ ಕೈಗೆ ಸಿಗಬೇಕೆಂದರು ತಪ್ಪಲ್ಲ; ಅಂದರೆ ಬದುಕನ್ನು ಕೆಟ್ಟ ಮಾರ್ಗದಲ್ಲಿ ದೂಡದೆ ಒಳ್ಳೆಯ ಮಾರ್ಗಕ್ಕೆ ಕೊಂಡೊಯ್ಯಲು ಸೂಕ್ತವಾಗಿದೆ. ಎಷ್ಟೋ ಜನರ ಬದುಕು 'ಕಾಮ' ಎನ್ನುವ ವಿಷಯದಿಂದಲೇ ಡಿವೊರ್ಸ್ ಗೆ ಬಂದು ನಿಂತ ಘಟನೆಯನ್ನು ಕಾಣಬಹುದು. ಎಷ್ಟೋ ಮಕ್ಕಳು ತಮಗೆ ಆಗುವ ಮಾನಸಿಕ ತೊಂದರೆಯನ್ನು ಹೇಳದೆ ಮನಸ್ಸಿನಲ್ಲಿ ಬಚ್ಚಿಟ್ಟು ಕೊರಗುವವರನ್ನೂ ಕಾಣಬಹುದು. ನಾನು ಹೇಳುವುದು ಇಷ್ಟೇ, ಸುಖ ಎನ್ನುವುದನ್ನು ಬೇರೆ ರೀತಿಯಲ್ಲಿ ಕಾಣಬಹುದು; ತಪ್ಪು ದಾರಿಗೆ ಇಳಿದು ನಿಮ್ಮ ಜೀವನದೊಂದಿಗೆ ನಿಮ್ಮನ್ನು ನಂಬಿಕೊಂಡಿರುವವರ ಜೀವನವನ್ನು ಕೊಲ್ಲಲು ಹೋಗಬೇಡಿ ಮತ್ತು ಆ ಸಂಕಷ್ಟವನ್ನು ಎಳೆದುಕೊಳ್ಳಬೇಡಿ.

     ವಿಮರ್ಶ- ಕಥನ ಸ್ಪರ್ಧೆಯನ್ನು ಆಯೋಜಿಸಿದ ಕಾಲೇಜು ಮತ್ತು ಕಾಲೇಜು ಗ್ರಂಥಾಲಯಕ್ಕೆ, ಈ ಪುಸ್ತಕ ಓದಿದ್ಯಲ್ಲ ಇದರ ಬಗ್ಗೆ ಬರೆಯಬಹುದಲ್ವಾ ಎಂದು ಸಲಹೆ ನೀಡಿದ ದಿವ್ಯಾಕ್ಕನಿಗೆ ಮತ್ತು ಕಾಲೇಜಿನಲ್ಲಿ ಪ್ರೋತ್ಸಾಹಿಸಿದ ನನ್ನ ಮಿತ್ರರಿಗೂ,‌ಉಪನ್ಯಾಸಕ ವೃಂದದವರಿಗೂ ಧನ್ಯವಾದಗಳು.

     ಈ ಬರವಣಿಗೆಯನ್ನು ಬ್ಲಾಗ್ ಲ್ಲಿ ಹಾಕಲು ಸಲಹೆ ನೀಡಿದ ನನ್ನ ಗೆಳತಿ ಹರೀಷ್ಮಾಳಿಗೂ ಮತ್ತು ಟೈಪಿಂಗ್ ನಲ್ಲಿ ತಿದ್ದುಪಡಿಸಿದ ಸ್ನೇಹಿತರಾದ ಶಿವಾನಂದ ಮತ್ತು ರಶ್ಮಿತಾಳಿಗೂ ಆತ್ಮೀಯ ಅಭಿವಂದನೆಗಳು.

-ಸಿಂಚನ ಕೆ ಎನ್
ಕುತ್ಯಾಳ, ಕುಡ್ನಕಜೆ ಮನೆ

Comments

Post a Comment

Popular posts from this blog

ಶ್ರೀಯಿಂದ ದಿವಂಗತದ ಕಡೆಗೆ

ಸವಿ ನೆನಪಿನ ಪಯಣದಲ್ಲಿ; ಇದೊಂದು ಕೂಡಿಟ್ಟ ನೆನಪು!