ಅರೆಭಾಷೆ ಬರವಣಿಗೆ: ಆಟಿ ಗೌಜಿ

 ಆಟಿ ಗೌಜಿ

     ನಾವು ಆಚರಿಸುವ ಹಾಂಗೆ ಎಲ್ಲಾ ತಿಂಗನು ತಿಂಗಳಾಡಿಂದ ಸುರಾಗಿ, ಸಂಕ್ರಮಣಕ್ಕೆ ಮುಗ್ದದೆ. ಕಾರ್ತಿಂಗಳಂದ ಮತ್ತೇ ಬರುವ ತಿಂಗನೇ ಆಟಿ ತಿಂಗ. ಈ ಆಟಿ ತಿಂಗಳ್ಳಿ ಸತ್ಯನಾರಾಯಣ ದೇವರ ಪೂಜೆ ಮಾಡಿರೆ ಬಾರಿ ಒಳ್ಳದ್ ಗಡ.

     ಆಟಿ ತಿಂಗ ಅಂತ ಹೇಳಿರೇ , ಬಾರಿ ಜೋರುನ ಮಳೆ ಬರುವ ತಿಂಗ. ಕೆಲ್ಸ ಮಾಡಿಕೆ ಆಗದೆ, ಕೆಲ್ಸಕ್ಕೂ ಹೋಕಾಗದೆ ಕಷ್ಟಲಿ ಬೊದ್ಕುವ ತಿಂಗ ಈ ಆಟಿ ತಿಂಗ. ತಾತನವು ಬೇಸಾಯ ಮಾಡಿಕಂಡ್ ಇರ್ಕಣ ನಮ್ಮ ಊರ್ಲಿ ಅಂದರೆ ಕಾರ್ತಿಂಗಳ್ಳಿಯೇ ಬೇಸಾಯ ಮುಗಿತಿತ್ತ್ ಗಡ . ಅದರೆ ಈ ಮಡಿಕೇರಿ ಅತ್ತ ಆಟಿ ಬೇಸಾಯಲಿ ಎಲ್ಲನೂ ಬೊಳ್ಳಲಿ ಹೋತ್ ಅಂತ ಹೇಳ್ದರ ಕೇಳ್ತ ಇದ್ದಗಡ. ಇದ್ ಬಾರಿ ಕಷ್ಟದ ತಿಂಗ ಹಾಂಗಾಗಿ ಈ ಕಾಲನಾ ತುಂಬಾ ಕೆಟ್ಟ ಕಾಲ ಅಂತ ಹೇಳುವೆ ಹಿರಿಯವ್.

     ಆಟಿ ತಿಂಗ ಹೇಳ್ದ ಕೂಡ್ಲೇ ನೆನ್ಪಿಗೆ ಬಾದೆ "ಆಟಿಕಳಂಜ". ಇದರೊಟ್ಟಿಗೆ ಗುಳಿಗಂಗೆ ಕೊಡುವ ಸಮ್ಮನ. ಆಟಿತಿಂಗಳಿ ಮರಕೆಸ ಎಲೆ ಪತ್ರೊಡೆ, ಕಣಿಲೆ ಗೈಪು, ಅಜಂಕ್ ಪಲ್ಯ, ಅಳುಂಬು, ಆಟಿ ಹದಿನೆಂಟರ ಆಟಿ ಪಾಯಸ, ಅಮಾವಾಸೆ ನ ಹಾಲೆಮರದ ಕಷಾಯ; ಇದೆಲ್ಲಾ ಆಟಿತಿಂಗಳ ವಿಶೇಷ ಆದರೆ ಅಟ್ಟಂದ ಇಳ್ಸಿದ ಚೆನ್ನಮಣೆ, ಕವಡೆ ಇದೆಲ್ಲಾ ಅದ್ಭುತ ಆಟಗ.

     ಆಟಿಕಳಂಜ ಈಗನ ಕಾಲಲಿ ಕಮ್ಮಿ ಆಗಿರ್ದು ಆದರೆ, ಹಿಂದೆ ತಾತನವರ ಕಾಲಲಿ ಮೂರು ವರ್ಗದವು ವೇಷ ಹಾಕಿಕಂಡ್ ಬರ್ತಾ ಇದ್ದಗಡ. ಸುರುಗೆ ಬಣ್ಣರ ದೆವ್ವ, ಮಳಿಯಾರ್ ದೆವ್ವ ಮತ್ತೆ ಅಜಲ ವರ್ಗದ ಆಟಿಕಳಂಜನ ವೇಷಧರಿಸಿ ಬರ್ತ ಇದ್ದಗಡ. ಬಣ್ಣರ್ ಮತ್ತೆ ಪಣಿಯಾರ್ ದೆವ್ವಗ ಬಾಕನ ಚೆಂಡೆ ಬಾರಿಸ್ತ ಬಂದದೆ. ಆಗ ಮನೇಲಿ ಇದ್ದವೂ ದೀಪ ಹೊತ್ಸಿದ್ ಮತ್ತೆ ಅವ್ವು ಭೂಮಿಗೆ ಎಣ್ಣೆಬುಟ್ಟುದು ಕುಣ್ದವೆ. ಕುಣ್ದು ಆದ ಮೇಲೆ ಅಂಗಳದ ಒಂದು ಕರೆಲಿ ನೆಣೆ ಬತ್ತಿ ಹೊತ್ಸಿಸಿ ಅವು ಕುಣ್ದ ಜಾಗಲಿ ಮಾಡಿ ಇಸಿದ ಕುರ್ದಿ ನೀರ್ನಾ ಹಾಕಕು. ಮತ್ತೆ ಒಂದು ತೊಡ್ಪೆ ನ ನಾಲ್ಕ್ ಮೂಲೆಲಿ ಒಂದು ಸೇರ್ ಭತ್ತ, ಅರ್ಧ ಸೇರ್ ಅಕ್ಕಿ, ಮತೆ ಉಪ್ಪು, ಹುಳಿ, ಮೆಣ್ಸ್, ಅರ್ಸಿನ ಮತೆ ಒಂದು ಕಾಯಿ ಇಸಿ ಕೊಡುವೊ. ಆದರೆ ಆಟಿಕಳಂಜ ಬಾಕನ ಚೆಂಡೆ ಬಾರ್ಸಿಕಂಡ್ ಬಾದು, ಬಾಕನ ದೀಪ ಉರ್ಸಿಕೆ ಇಲ್ಲೆ, ಮತೆ ಅದ್ ಕುಣ್ದ ಮೆಲೆ ನೆಣೆ ಇಸಿಕೆ ಇಲ್ಲೆ, ಮತ್ತೆ ಅದಕ್ಕೆ ಬೂದಿ ಉಂಡೆ ಅಥವಾ ಬೂದಿ ನೀರ್ ಅಥವಾ ಕುರ್ದಿ ನೀರ್ನಾ ಚೋಂಪುವೆ. ಇದ್ ಕೆಲವೂಮ್ಮೆ ಅದರ ಕೊಡೆನ ಅಡ್ಡ ಹಿಡ್ದು ತಪ್ಪುಸಿ ಕಂಡದೆ. ಮತೆ ತಡ್ಪೆಲಿ ಇದಿಕ್ಕು ಹಾಕಿ ಕೊಟ್ಟವೆ ಗಡ. ಈ ಆಟಿಕಳಂಜಗ ಬಾದು ಮನೆಗೆ ಬಂದ ಮಾರಿನ ಓಡ್ಸಿಕೆ ಅಂತ ಅವ್ವ ಹೇಳ್ತಾ ಇದ್ದ. ಈ ಮೂರು ವೇಷ ಹಾಕಿ ಬಾದರ ನಾವು ಕೋಲ್ಚಾರ್ ಕಡೆ ಹೋದರೆ ಕಾಂಬಾಕೆ ಸಿಕ್ಕುದು. ಆದರೆ ನಾ ಇರುವ ಊರು ದೇವಚಳ್ಳ ಗ್ರಾಮಲಿ "ಆಟಿಕಳಂಜ" ಮಾತ್ರ ನೋಡಿಕೆ ಸಿಕ್ಕಿದೆ. 

     ಪತ್ತನಾಜೆ ಕಳ್ದ ಮೇಲೆ ನಾವುಗೆ ಸುರುನ ಹಬ್ಬ ಅಂದರೆ ಅದ್ "ನಾಗರ ಪಂಚಮಿ". ಈ ಹಬ್ಬ ಜಾಸ್ತಿಯಾಗಿ ಆಟಿ ತಿಂಗಲಿಯೇ ಬಾದು ಅಂತ ಅಮ್ಮ ಹೇಳ್ತಾ ಇದ್ದ. ಆಟಿಲಿ ಯಾರು ಕೂಡಾ ಮದುವೆ ಯಾವುದು ಮಾಡ್ದುಲೆ. ಹೊಸ ನೆಂಟ್ರು ಬಾದು, ಹೋದು ಇದ್ ಯಾವುದು ಇರಿಕಿಲ್ಲೆ. 

     ಆಟಿನ ವಿಶೇಷ ಆಟ, ಮಂಜುಟ್ಟಿ ಕಾಯಿಲಿ ಆಡುವ ಚೆನ್ನಮಣೆ ಆಟ. ಅಟ್ಟಲ್ಲಿದ್ದ ಮಣೆಗೆ ಎಣ್ಣೆ ಪೂಜಿದ್ ಕೈ ಮುಗ್ದ್ ಕೆಳಗೆ ಇಳ್ಸಿದ್ ಆಡುವೆ. ಮತ್ತೇ ಈ ಆಟನಾ ಒಂದೇ ಅಪ್ಪಂಗೆ ಹುಟ್ಟಿದ ಮಕ್ಕ(ಸ್ವಂತ ಅಣ್ಣ-ತಮ್ಮಂದರ್, ಅಕ್ಕ- ತಂಗೆಗಾ) ಆಡಿಕೆ ಬೊತ್ತು.ಮತೆ ಗಂಡ- ಹೆಣ್ಣ್ ಎದುರು ಕುದ್ದು ಆಡಿಕೆ ಬೊತ್ತು. ಈ ಆಟನಾ ಅಷ್ಟಮಿ ದಿನಲಿ ಚಂದ್ರ ಕಾಂಬಕನ ಮುಟ್ಟ ಆಡಕ್. ಮತ್ತೆ ಆ ದಿನ ಉಪವಾಸಲಿ ಕುದ್ದಿದ್ದವೆ ಗಡ. ಚಂದ್ರ ಕಂಡ ಮೇಲೆ ದೋಸೆ, ಬಾಳೆಹಣ್ಣ್ ರಸಯಾನ ಮಾಡಿ ತಿನ್ನುವೊ. ಮರ್ದಿನಾ ಮಣೆನಾ ತೊಳ್ದು ಕೈ ಮುಗ್ದು ಅಟ್ಟಲಿ ಇಸುವೆ.



     ಇನ್ನ್ ಮದುವೆ ಆದಾ ಹೊಸ ಮಧುಮಗಳ್ ಗಂಡನ ಮನೆಂದ ತವ್ರು ಮನೆಗೆ ಹೋಗುವ ಕ್ರಮ ಉಟ್ಟು. ಮುಂದೆಲ್ಲಾ ಆಟಿ ಸುರು ಆದ ದಿನದಿಂದ ಆಟಿ ಮುಗೆವ ತನಕ ತವ್ರುಮನೆಲಿ ಇರಕಿತ್ತ್. ಆಟಿ ಸುರು ಆಕನಾ ತವ್ರುಮನೆವು ಆ ಹೆಣ್ಣ್ನಾ ಕರ್ಕಂಡ್ ಹೋಕು. ಮತ್ತೆ ಸೋಣದ ಒಂದು ದಿನದ ಮೊದಲು ಆಟಿ ಅಕೇರಿ ದಿನದಂದ್ ಗಂಡನಮನೆವು ಕರ್ಕಂಡ್ ಬರಕಿತ್ತ್. ಯಾಕೆ ಈ ಕ್ರಮ ಮಾಡುವೆ ಅಂತಹೇಳಿರೆ, ಈ ತಿಂಗ ತುಂಬಾ ಕೆಟ್ಟ ತಿಂಗ ಆಗಿದ್ದ್; ಆಟಿತಿಂಗಲಿ ಗರ್ಭ ನಿಂತ್ತರೆ ಆ ಹುಟ್ಟುವ ಕೂಸು ರೋಗಲಿ ಕೂಡಿದ್ದದೆ ಅಂತ ಹಿರಿಯರ್ ಹೇಳುವ ಮಾತ್ ಇದ್ ಆಗುಟು.



     ಆಟಿತಿಂಗ ಒಳ್ಳೆದ್ ಅಥವಾ ಕೆಟ್ಟ ತಿಂಗ ಏನೇ ಆಗಿದ್ದರೂ ತುಂಬಾ ಮಹತ್ವದ್ದ್ ಅಂತ ನಾ ಹೇಳ್ನೆ. ಗುಳಿಗಂಗೆ ಊರುನವು ಎಲ್ಲಾ ಸೇರಿ ಕೊಡುವ ಸಮ್ಮನಾ ಆಗಿರ್ದು, ಆಟಿ ಹದಿನೆಂಟರ ಪಾಯಸ, ಅಮಾವಾಸೆನ ಹಾಲೆ ಮರದ ಕಷಾಯ, ಆಟಿ ಕಳಂಜ, ಚೆನ್ನಮಣೆ ಆಟ, ತಿಂಬ ತಿಂಡಿಗ, ಮಾಡ್ವ ಕೆಲ್ಸ, ಬೀಳುವ ಮಳೆ ಇವೆಲ್ಲ ಒಂದೊಂದು ಕಥೆನಾ ಹೇಳ್ದೆ. ಈ ಕಥೆನಾ ಕೇಳಿಕನಾ ಈಗದ ಜಗತ್ತ್ಲಿ ಕೆಲವೊಂದು ಮಾಯ ಆಗಿರ್ದು. ಇನ್ನೂ ಕೆಲವು ಕಾಂಬಕ್ಕೆ ಸಿಕ್ಕುದ್ದು. ಇದೆಲ್ಲಾ ನಮ್ಮ ಕಾಲಲಿ ಸಿಕ್ಕಿರೆ ಮುಂದೆನಾ ಹೊಸ ಜಗತ್ತಿಗೆ ಈ ಪದ್ದತಿ, ವಿಶೇಷ, ಹಳೆ ಕತೆಗಾ ಅವ್ಕೆ ತಿಳಿಯಕು ತೇಳ್ದು ನನ್ನ ಆಸೆ. ಇದೆಲ್ಲಾ ಆಟಿ ಗೌಜಿ ಆಗುಟು.


-ಸಿಂಚನ.ಕೆ.ಎನ್

ಕುತ್ಯಾಳ, ಕುಡ್ನಕಜೆ ಮನೆ.

Comments

  1. 🙏🙏🙏
    ಬರಿತಾ ಇರ್‌ಯ...
    ಭಾಷೆ ಬಳ್ಸಮು...
    ಭಾಷೆ ಉಳ್ಸಮು...

    ReplyDelete
  2. ಲಾಯ್ಕ ಉಟ್ಟು 🥰👍

    ReplyDelete
  3. Super 👌tangi. Tumba laaykili bardala. Hinge baretiru.

    ReplyDelete
  4. ಬರೀತಾನೆ ಹಳಬರ ಬದುಕು ಹೊಸಬರಿಗೆ ಉಣ್ಸಮ. ಒಳ್ಳೆದಾಗಲಿ

    ReplyDelete

Post a Comment

Popular posts from this blog

ಹಲ್ಸಿನ ಹಣ್ಣ್ ದೆ ಕಾರ್ಬಾರ್ ! -ಸಿಂಚನ ಕೆ.ಎನ್, ಕುತ್ಯಾಳ

ಪ್ರೀತಿಯ ಯಾನ ಸಿಂಚನ ಕೆ.ಯನ್

ಮನದ ಮಾತು! -ಸಿಂಚನ ಕುತ್ಯಾಳ