Posts

Showing posts from October, 2025

ಶ್ರೀಯಿಂದ ದಿವಂಗತದ ಕಡೆಗೆ

ಶ್ರೀಯಿಂದ ದಿವಂಗತದ ಕಡೆಗೆ ಹುಟ್ಟು ಮತ್ತು ಸಾವು ದೇವರು ಕೊಡುವ ವರ ಅಂದರೂ ತಪ್ಪಲ್ಲ. ಇವರೆಡರ ನಡುವೆ ಮನುಷ್ಯನು ಎಷ್ಟು ಒಳ್ಳೆಯ ಮತ್ತು ಕೆಟ್ಟ ಕರ್ಮಗಳನ್ನು ಮಾಡಿರುತ್ತಾನೆ ಅದರ ಸೂಚನೆಯಲ್ಲಿ ಸ್ವರ್ಗವೋ...ನರಕವೋ..‌‌‍. ಎಂದು ಭೂಮಿಯಲ್ಲಿಯೆ ನಿಶ್ಚಯವಾಗುತ್ತದೆ. ಭಗವದ್ಗೀತೆಯಲ್ಲಿ ಹೇಳಿದಂತೆ ಮನುಷ್ಯ ಜನ್ಮವೂ ಇಂದು ನಮ್ಮದಾಗಿದೆ ಅಂದರೆ ಅದು ಪುಣ್ಯದ ಕೆಲಸದಿಂದ ಲಭಿಸಿದ ಫಲ. ದಿವಂಗತ ಕುಶಾಲಪ್ಪ ಮತ್ತು ದಿವಂಗತ ಚಿನ್ನಮ್ಮ ಇವರ ಪ್ರಥಮ ಪುತ್ರನಾದ ರೂಪಾನಂದ ಗೌಡ ಕೆ ಇವರು ದಿನಾಂಕ:22/03/1954 ರಂದು ಜನಿಸಿ, ತನ್ನ ಸಹೋದರ ಮತ್ತು ಸಹೋದರಿಯರಿಗೆ ಹಿರಿಯ ಮಾರ್ಗದರ್ಶಿಯಾಗಿದ್ದವರು ಅವರೇ ನನ್ನ ತಾತ. ದಿನಾಂಕ: 22/04/1977 ರಂದು ದಿವಂಗತ ಹುಕ್ರಪ್ಪ ಮತ್ತು ದಿವಂಗತ ಅಕ್ಕಯ್ಯ ಇವರ ಪ್ರಥಮ ಪುತ್ರಿಯಾದ ಮೀನಾಕ್ಷಿ ಇವರನ್ನು ಮದುವೆಯಾಗಿ ದಾಂಪತ್ಯ ಜೀವನವನ್ನು ಸುಖವಾಗಿ ಸ್ವೀಕರಿಸಿದವರು. ಸುಪುತ್ರಿ ಮತ್ತು ಮೂರು ಜನ ಗಂಡು ಮಕ್ಕಳನ್ನು ಹೊಂದಿದ್ದು ಅವರ ಏಳಿಗೆಗೆ,‌ಜೀವನಕ್ಕೆ ಮತ್ತು ಬದುಕಿಗೆ ಬೆನ್ನೆಲುಬಾಗಿ ನಿಂತವರು ನನ್ನ ತಾತ. ಇನ್ನೂ ಕೇವಲ ನೆನಪೊಂದೆ ಮನಸ್ಸಿನಲ್ಲಿ ಅಚ್ಚು ಉಳಿದ ವ್ಯಕ್ತಿತ್ವ. ಬಿಳಿ ವಸ್ತ್ರದ ಪಂಚೆ ಮತ್ತು ಅಂಗಿ, ಕೊರಳ ಪಟ್ಟಿಗೆ ಧರಿಸಿರುವ ಕರವಸ್ತ್ರ, ಎಡದ ಕೈಯಲ್ಲಿ ದೊಡ್ಡ ಕನ್ನಡಿಯ ವಾಚ್, ಮುಖದಿಂದ ತಪ್ಪದ ಕನ್ನಡಕ, ಎತ್ತರವಾಗಿದ್ದು ಗಟ್ಟಿ-ಮುಟ್ಟದ ಶರೀರ. ತೋಟಕ್ಕೆ -ಪೇಟೆಗೆ ಹೋಗಿ ಬಂದರು ಬಾಯಾರಿಕೆ ನೀಗುವ ಮೊದಲು ಕ...