ಅರೆಭಾಷೆ ಬರವಣಿಗೆ: ಸಿಂಚನ.ಕೆ.ಯನ್

 ಕಾರ್ತಿಂಗಳ ಹರಕೆ

     

ಪಗ್ಗು, ಬೇಸಗೆ, ಕಾರ್ತಿಂಗ, ಆಟಿ, ಸೋಣ, ನಿರ್ನಾಲ್, ಬೆನ್ತಿಂಗ, ಜಾರ್ಥೆ, ಪೆರಾರ್ಥೆ, ಪೊನ್ನಿ(ಪುಯಿಂತೆಲ್), ಮಾಯಿ ಹಾಗೂ ಸುಗ್ಗಿ ಇದಿಸ್ಟ್ ಹನ್ನೆರಡ್ ತಿಂಗಗ ಇದ್ದ್ ಅದರ್ಲಿ ಕಾರ್ತಿಂಗದ ಗೌಜಿನ ಹೇಳಿಕೆ ಇಚ್ಚಿಸಿನೆ.


     ನಮ್ಮ ತಾತನವರ ಕಾಲಲಿ ಬೇಸಾಯ ಮಾಡಿಕಂಡ್ ಇದ್ದ ಸಮಯ ಆಗಿತ್ತ್. ಆ ಸಮಯಲಿ ಬಿಸಿಲ್, ಮಳೆತೇಳದೆ ಗದ್ದೆಲೇ ಬೇಸಾಯ ಮಾಡಿ ದುಡ್ದವ್ಕೆ ಈ ಕಾರ್ತಿಂಗ ಒಂದು ರೀತಿಲಿ ಗೌಜಿ ಇದ್ದಾಂಗೆ.


     ನಾವು ಬೆಳ್ಸಿದ ಬೆಳೆಗ ಪೊರ್ಲುಲಿ ಬೆಳೆಲಿ ತಾ ಗುರು ಹಿರಿಯವ್ಕೆ ಒಂದು ಕೋಳಿ ಕೊಂದು ಗೈಪು ಮಾಡಿ ಮತ್ತೆ ಹಲಸಿನಹಣ್ಣಿನ ಮೂಡೆ ಹಿಟ್ಟ್ಲಿ ಸಮ್ಮನದ ಒಟ್ಟಿಗೆ ಪಾಷಣಮೂರ್ತಿ ದೆವ್ವಕೆ ಎಡೆ ಇಕ್ಕಿ ಸಮ್ಮನ ಮಾಡ್ದು ಈ ತಿಂಗಳ್ಳಿ ಆಗಿದ್ದದೆ.


     ಮನೆ ಹೆಣ್ಣ್ ಮಕ್ಕ ಬೊಳ್ಪ್ಪಿಗೆ ಬೇಗ ಎದ್ದ್ ದ್ ಮನೆ ಎಲ್ಲ ಗುಡ್ಸಿ, ಒರ್ಸಿದ್ ಅಕ್ಕಿನ ಪದುನಿಕೆ(ನೆನೆ) ಹಾಕುವ, ಹಲ್ಸುನಹಣ್ಣ್ ನ ತಂದ್ ಅದರ ಕೊಯ್ದ್ ತೋಳೆ ಬೇರೆ ಹಲಸಿನಕ್ಕಿ ಬೇರೆ ಮಾಡುವ, ಮತೇ ಸಾಗ್ವಾನಿ ಇಲ್ಲರ್ ಉಪ್ಲಿಕೆ ಸೊಪ್ಪು ನ (ಎಲೆ)ಕೊಯ್ಕಂಡ್ ಬರುವ. ಅದರ ತಂದಮೇಲೆ ಬಟ್ಟೆಲಿ ಲಾಯಿಕ್ ಪೂಜಿದ್ ಬಲೆ ಪೂರ ತೆಗ್ದ್ ಒಂದು ಕರೆಲಿ ಇಸುವ. ಹಿಂಬೊತ್ತು ಆಕಂಡ್ ಬಾಕನ ಪದುನ್ಸಿದ (ನೆನೆ ಹಾಕಿದ)ಅಕ್ಕಿನ ಮತ್ತೆ ಬುಡ್ಸಿಸಿದ ಹಲ್ಸ್ ನಹಣ್ಣ್ ನ ಕಲ್ಲ್ ಗೆ ಹಾಕಿ ಕಡ್ದ್ ಬಂದನ ತೆಗ್ದ್ ಪೂಜಿ ಇಸಿದ ಸೊಪ್ಪುನ ಮೇಲೆ ಈ ಬಂದನ ಪೂಜಿಸಿದ್ ಎಲೆನಾ ಮದ್ಚಿಸಿದ್ ಇಡ್ಲಿ ಮಡಿಕೆಲಿ ಸೆಕೆ ಬರ್ಸಿಕೆ ಇಸುವ.


     ಇದರೊಟ್ಟಿಗೆ ಮನೆ ಯಾಜಮಾನ ಪೂರ್ವ ದಿಕ್ಕಿಗೆ ನಿಂತ್ ಹುಂಜ ಕೋಳಿನ ತಕಂಡ್ ಅದರ ಕಾಲ್ ತೋಳ್ಸಿದ್ , ಅಕ್ಕಿ ತಿನ್ಸಿದ್ ಮತೇ ನೀರ್ ಕುಡ್ಸಿ ಮನೆಲಿ ಇದ್ದವರೊಟ್ಟಿಗೆ ಹೇಳಿದ್ ಕೋಳಿ ಕೊಲ್ಲುವೊ. ಮತ್ತೆ ಮನೆ ಯಜಮಾನ ಮೀದ್ದ್ ಗಂಜಿಗೆ ನೀರ್ನೊಟ್ಟಿಗೆ ಅಕ್ಕಿನ ಇಸಿದ್, ಮತ್ತೆ ಮೊಟ್ಟೆ ಇಸದ ಹೇಂಟೆ ಕೋಳಿನ ತಕಂಡ್ ಬಂದ್ ಅದರ ಕಾಲ್ ತೊಳ್ದ್, ಅಕ್ಕಿ ತಿನ್ಸಿದ್, ನೀರ್ ಕುಡ್ಸಿದ್ ಕೊಲ್ಲುವ. 


     ಈ ಪಾಷಣಮೂರ್ತಿ ದೆವ್ವಕ್ಕೆ ಕೋಳಿ ಕೊಲ್ಲಿಕನ ಹೇಂಟೆನೆ ಆಕು, ಮೊಟ್ಟೆ ಇಸಿಕೆ ಬೋತ್ತು, ಮೊಟ್ಟೆ ಇಸಿದ್ದರೆ ಅದ್ ಐದ್ ಅಥವಾ ಏಳ್ ಮೊಟ್ಟೆಗಿಂತ ಜಾಸ್ತಿ ಆಕೆಬೊತ್ತು.ಗೈಪು ಮಾಡಿಕನ ಈ ಮೊಟ್ಟೆನನು ಗೈಪಿಗೆ ಹಾಕೊಕು.


     ಮತ್ತೆ ಮನೆಲಿ ಇದ್ದವೂ ಎಲ್ಲ ಮೀದ್ದ್ ಈ ಬೇಸಾಯ ಮಾಡಿಕೆ ಯಾರೆಲ್ಲ ಬಂದಿದ್ದ ಅವೆಲ್ಲಾ ಬಂದ ಮೇಲೆ ಮನೆಯೊಳಗೆ ಮಣೆ ಹಾಕಿದ್ದ್ ಬಾಳೆಲೆ ಹಾಕಿ ಕಾಲ್ ದೀಪ ಹೊತ್ಸಿಸಿದ್ ಕಾರ್ನೊರಿಗೆ ಇಸಿಕನ ಮೂಡೆಹಿಟ್ಟ್ ಇಸಿದ್ ಮತ್ತೆ ಕೋಳಿ ಗೈಪು ಹಾಕಿದ್ದ್ ಹುಗ್ಗೆನಾ ಬಡ್ಸಿದ್ ಇನ್ನೊಂದು ಬಾಳೆಲೆಲಿ ಪೊಕ್ಳ ರೊಟ್ಟಿನಾ ಹಾಕಿದ್ದ್ ಹುಗ್ಗೆನಾ ಇಕ್ಕಿ ಮತ್ತೆ ಕೋಳಿ ಗೈಪು ಬಡ್ಸಿ ಆ ಎರಡ್ ಎಡೆಗೆ ಕೇಪ್ಳು ಹೂ, ಎಲಾಡ್ಕೆ(ಎಲೆ ಅಡಿಕೆ)ಮತ್ತೆ ಒಂದು ಬಾಳ್ಳೆ ನ ಮೂರು ಕೀಂತ್ ಮಾಡಿ ಅದರ್ಲಿ ಜೊನ್ನೆ(ಕಿಲ್ಲಿ) ಮಾಡಿ ಕುರ್ದಿ ನೀರ್ , ಇನ್ನೊಂದರಲ್ಲಿ ಮಸಿ ನೀರ್ ಮತ್ತೊಂದರ್ಲಿ ಬೆಲ್ಲದ ನೀರ್ನಾ ಇಸುವೆ. ಮತೇ ಕೆಲವು ಮನೆಲಿ ಒಂದು ಗ್ಲಾಸ್ ಲಿ ಬೀಜದ ಸರಾಯ ಇಸುವ. ಎಲ್ಲಾ ಬಡ್ಸಿ ಆದಾಮೇಲೆ ಗಂಧದ ದೂಪಲೀ ಶುದ್ದ ಮಾಡಿ ಗುರು-ಹಿರಿಯರೊಟ್ಟಿಗೆ ಮತೇ ಪಾಷಣಮೂರ್ತಿ ದೆವ್ವದೊಟ್ಟಿಗೆ ಪ್ರಾರ್ಥನೆ ಮಾಡಿ ದೀಪಕ್ಕೆ ಕೈ ಮುಗಿದ್ ಗಂಧ ಬೊಟ್ಟು ಹಾಕಿ ಅಲ್ಲಿಂದ ಎಲ್ಲವೂ ಹೊರಗೆ ಬರಕು ಮತ್ತೆ ಐದ್ ನಿಮಿಷ ಬುಟ್ಟು ಮನೆಯ ಯಜಮಾನ ಆ ಅಗೆಲ್ ಗೆ ಚೂರು ನೀರ್ ಹಾಕಿ ಬಾಳೆ ಎಲೆನಾ ಜಾರ್ಸಕು. ಈ ಸಮ್ಮನಾ ಮಾಡ್ದ ಎಲೆನಾ ಮನೆಯವು ಪ್ರಸಾದದ ಹಂಗೆ ಚೂರು ಚೂರು ಮನೆಯವು ತಕಣಕೋ.


     ಮತೇ ಬಂದ ನೆಂಟ್ರಿಗೆ, ಬೇಸಾಯಲಿ ಸೇರ್ದವುಕ್ಕೆ ಕೋಳಿ ಗೈಪು, ಮೂಡೆಹಿಟ್ಟ್ ಮತ್ತೆ ಪೊಕ್ಳರೊಟ್ಟಿ ಎಲ್ಲನೂ ಊಟಕ್ಕೆ ಕೊಡುವ.ಆ ದಿನನಎಲ್ಲವೂ ಭಾರಿಗೌಜಿಲಿ ಕಳೆವೊ. ಈ ಗೌಜಿನ ಊಟನೇ "ಕಾರ್ತಿಂಗಳ ಹರಕೆ".


      ಈಗ ತರವಾಡು ಮನೆಲಿ ಈ ಹರಕೆನಾ ಮಾಡುವೆ. ಮತ್ತೇ ಯಾರ್ ಪಂಡುಂದ ಆಚರಿಸ್ತಿದ್ದನೋ ಆ ಮನೆಲಿ ಈ ಹರಕೆನಾ ಮಾಡುವೆ. ಕಾಲ ಬದಲಾಗಿರ್ದು! ಬೇಸಾಯ ಇಲ್ಲೆ. ಆದರೆ ದೈವ- ದೇವರುಗಳ ಸಮ್ಮನಾ ಮಾಡ್ದರ ನಮ್ಮ ಹಿರಿಯವೂ ಮರ್ತತ್ಲೇ . ಇದ್ ಹಿಂಗೇನೆ ಮುಂದಿನ ಪೀಳಿಗೆಗೂ ಗೊತ್ತಾಕ್ಕು...


-ಸಿಂಚನ ‌.ಕೆ.ಎನ್

ಕುತ್ಯಾಳ, ಕುಡ್ನಕಜೆ ಮನೆ

Comments

  1. ಬರ್‌ದ ಶೈಲಿ ತುಂಬಾ ಲಾಯ್ಕಿ ಉಟ್ಟುಯ...
    ಇನ್ನೂ ಬೇರೆ ಬೇರೆ ವಿಷಯದ ಬಗ್ಗೆ ಬರಿತಾ ಇರ್
    ಭಾಷೆ ಬಳ್ಸಮು... ಭಾಷೆ ಉಳ್ಸಮು...

    ReplyDelete
  2. Laik autu sinchu hinge munduvaryali ninna baravanige all the best.

    ReplyDelete

Post a Comment

Popular posts from this blog

ಹಲ್ಸಿನ ಹಣ್ಣ್ ದೆ ಕಾರ್ಬಾರ್ ! -ಸಿಂಚನ ಕೆ.ಎನ್, ಕುತ್ಯಾಳ

ಪ್ರೀತಿಯ ಯಾನ ಸಿಂಚನ ಕೆ.ಯನ್

ಮನದ ಮಾತು! -ಸಿಂಚನ ಕುತ್ಯಾಳ