ವಿಮರ್ಶೆ ಕಥಾನ - ಕವಲು
ವಿಮರ್ಶೆ ಕಥಾನ- ಕವಲು ಮೊದಲಿಗೆ ನಾನು ಪುಸ್ತಕವನ್ನು ಆಯ್ಕೆ ಮಾಡಿಕೊಂಡ ಕಾರಣವೇ ಲೇಖಕರು, ಅವರೇ ಎಸ್.ಎಲ್.ಭೈರಪ್ಪ , ಇವರು ಬರೆಯುವ ಲೇಖನಗಳ ಶೈಲಿಯನ್ನು ಕೇಳಿದ್ದೆ; ಆದರೆ ಓದಿರಲಿಲ್ಲ. ಓದಲು ಕಾರಣವಾದದ್ದೆ ೨೦೨೩(2023)ರ ಕ್ರಿಸ್ಮಸ್ ರಜೆ. ಕೇವಲ ಲೇಖಕರ ಹೆಸರನ್ನು ನೋಡಿ ಮೊದಲ ಪುಟದಲ್ಲಿ ಏನಿರಬಹುದು ಎಂದುಕೊಂಡಾಗ "ಸರಿಯಾಗಿ ತಿಳಕ. ನಾನು ನಿನಗೆ ಕಸಿನ್ ಅಲ್ಲ. ಬ್ರದರ್. ಅಂದರೆ ಅಣ್ಣ. ನೀನು ನನಗೆ ಸಿಸ್ಟರ್. ಅಂದರೆ ತಂಗಿ'', ಈ ಸಾಲುಗಳು ನನ್ನನ್ನು ಕುತೂಹಲಕಾರಿಯ ಕಡೆಗೆ ಎಳೆಯಿತು. ಅದೇ ಪುಸ್ತಕದ ಹೆಸರು " ಕವಲು". ಕವಲು, ಅರ್ಥವೇ ಹೇಳುತ್ತದೆ ರೆಂಬೆ, ಕೊಂಬೆ. ವಿಷಯಗಳು ಸಕರಾತ್ಮಕವಾಗಿರಲಿ, ನಕರಾತ್ಮಕವಾಗಿರಲಿ ಕವಲು ಒಡೆದ ಕೂಡಲೇ ವಿಷಯ ಪಸರಿಸುತ್ತದೆ. ಪುಟ ಸಂಖ್ಯೆ ೨೪(24) ಮತ್ತು ೨೫(25)ಕ್ಕೆ ಬಂದು ನಿಂತಾಗ; ನಾನು ಆರಿಸಿರುವ ಪುಸ್ತಕ ತಪ್ಪಾಗಿದೆ; ಸಾಕು ನಿಲ್ಲಿಸುವ ಎಂದೆನಿಸಿತು. ಸ್ವಲ್ಪ ನಂತರ ಮತ್ತೊಮ್ಮೆ ಪುಸ್ತಕವನ್ನು ಕೈಗೆತ್ತಿಕೊಂಡು ಸಣ್ಣ ಮಟ್ಟಿಗೆಯ ಕಾದಂಬರಿ ಓದುಗಾರಳಾದ ನಾನು ಓದಲೇ ಬೇಕು ಎಂದೆನಿಸಿ ಶುರುಮಾಡಿದಾಗ ೩೦೦(300) ಪುಟಕ್ಕೆ ತಲುಪಿದ್ದು ಗೊತ್ತೇ ಆಗಲಿಲ್ಲ. ಓದಿದ ನಂತರ ಸಾರ್ಥಕತೆ ಎಂದೆನಿಸಿತು; ಜೊತೆಗೆ ಈ ಪುಸ್ತಕದ ಪರಿಚಯವನ್ನು ಕೆಲವರೊಂದಿಗೆ ವಿಮರ್ಶಿಸಿದುವುದರ ಜೊತೆಗೆ ಎಷ್ಟು ಪ್ರಶ್ನೆಗಳನ್ನು ಹುಟ್ಟಿಸಿವೆ; ಬದುಕು ಎಂದರೆ ಏನನ್ನೆಲಾ ಎದುರಿಸಬಹುದು ಎಂಬುದಕ್ಕೆ ಸಾಕ್ಷಿ...